26th April 2024
Share

TUMAKURU:SHAKTHIPEETA FOUNDATION 

ಕೇಂದ್ರ ಸರ್ಕಾರ ದೇಶದ ಪ್ರತಿಯೊಂದು ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿಗಳ’ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲೆಗಳಲ್ಲಿ ಲೋಕಸಭಾ ಸದಸ್ಯರ’ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ’ ರಚಿಸಿದೆ. ಉದ್ದೇಶವೂ ಬಹಳ ಉತ್ತಮವಾಗಿದೆ. ಆದರೇ ಕಾಲಕಾಲಕ್ಕೆ ಸಭೆಗಳನ್ನು ನಡೆಸದೇ ಇರುವ ರಾಜ್ಯಗಳು ಮತ್ತು ಜಿಲ್ಲೆಗಳು ಇವೆ.

ದಿಶಾ ಸಮಿತಿ ಸಭೆಗಳು ಕಡ್ಡಾಯವಾಗಿ ನಡೆಯಬೇಕಾದರೆ ಕೇಂದ್ರ ಸರ್ಕಾರ ದಿಶಾ ಸಮಿತಿಗೆ ಅಮೆಂಡ್ ಮೆಂಟ್ ಮಾಡಿ ಕೆಳಕಂಡ ಕೆಲವು ಹೊಸ ಅಂಶಗಳನ್ನು ಸೇರ್ಪಡೆ ಮಾಡುವುದು ಅಗತ್ಯವಾಗಿದೆ.

 ಕೇಂದ್ರ ಸರ್ಕಾರದಿಂದ ಯಾವುದೇ ಇಲಾಖೆಯ, ಇಲಾಖಾ ವ್ಯಾಪ್ತಿಯಡಿಯಲ್ಲಿ ಬರುವ ನಿಗಮಗಳು, ಕಾರ್ಪೋರೇಷನ್‌ಗಳು, ಎಸ್.ಪಿ.ವಿಗಳು, ಬೋರ್ಡ್‌ಗಳು ಹೀಗೆ ರಾಜ್ಯ ಸರ್ಕಾರಗಳಿಗೆ, ಎನ್.ಜಿ.ಓ ಗಳಿಗೆ ‘ಹಣ ಬಿಡುಗಡೆ ಆದ ತಕ್ಷಣ’ ಆ ಹಣವನ್ನು ಖರ್ಚು ಮಾಡುವ ಮುನ್ನ ಯಾವ ವ್ಯಕ್ತಿಗೆ, ಯಾವ ಕುಟುಂಬಕ್ಕೆ ಯಾವ ಉದ್ದೇಶಕ್ಕೆ ಬಳಸಲಾಗುವುದು ಎಂಬ ಬಗ್ಗೆ ವಂಶವೃಕ್ಷ, ಆಧಾರ್ ನಮೂದಿಸಿ ‘ದಿಶಾ ಸಮಿತಿ ನಿರ್ಣಯ’ ಮಾಡುವ ಮೂಲಕ ಅನುಮತಿ ಪಡೆಯಬೇಕು

  ವಿವಿಧ ಕಾಮಗಾರಿಗಳನ್ನು ಯಾವ ಗ್ರಾಮದಲ್ಲಿನ, ಯಾವ ಸರ್ವೆನಂಬರ್‌ಗಳಲ್ಲಿ ಯಾವ ಯೋಜನೆಗೆ ಹಣ ಬಳಸಲಾಗುವುದು ಎಂಬ ಬಗ್ಗೆ ಜಿಐಎಸ್ ಆದಾರಿತ ಜಿಲ್ಲೆಯ ಎಲ್ಲಾ ಇಲಾಖೆಗಳ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ‘ಒಂದೇ ನಕ್ಷೆಯಲ್ಲಿ ಗುರುತಿಸಿ ‘ ಕಡ್ಡಾಯವಾಗಿ ದಿಶಾ ಸಮಿತಿ ನಿರ್ಣಯ ಆಗಲೇ ಬೇಕು.

  ‘ಅಂತಿಮ ಬಿಲ್’ ನೀಡುವಾಗ ನಕ್ಷೆಯಲ್ಲಿ ಇತಿಹಾಸ ಸಹಿತ ಅಫ್‌ಲೋಡ್ ಮಾಡುವುದು ಕಡ್ಡಾಯವಾಗ ಬೇಕು. ಅದು ಸಹ ದಿಶಾ ಸಮಿತಿಯಲ್ಲಿ ನಿರ್ಣಯವಾಗಬೇಕು.

  ಕೇಂದ್ರ ಸರ್ಕಾರ ಮೊದಲನೇ ಹಂತದ ನಂತರದ ಹಣ ಬಿಡುಗಡೆ ಮಾಡಲು ‘ಯೂಸಿ’ (ಯುಟಿಲೈಸೇಷನ್ ಸರ್ಟಿಫಿಕೇಟ್) ಸಲ್ಲಿಸುವ ಮುನ್ನ ಕಡ್ಡಾಯವಾಗಿ ದಿಶಾ ಸಮಿತಿ ನಿರ್ಣಯ ಲಗತ್ತಿಸಬೇಕು.

  ದೇಶದ ಪ್ರತಿ ಗ್ರಾಮವಾರು, ಕುಟುಂಬವಾರು ಪಲಾನುಭವಿಗಳ ಮಾಹಿತಿಗಾಗಿ ವ್ಯಕ್ತಿಗೆ ಮತ್ತು ಕುಟುಂಬಕ್ಕೆ ‘ನೇರವಾಗಿ ಅವರ ಬ್ಯಾಂಕ್ ಖಾತೆಗೆ ನೀಡುವ ಹಣದ’ ಬಗ್ಗೆ ಗ್ರಾಮವಾರು, ಕುಟುಂಬವಾರು, ವ್ಯಕ್ತಿವಾರು ಮಾಹಿತಿಯನ್ನು ‘ಒಂದೇ ಕಡೆ’ ಸಂಗ್ರಹಿಸಿ ಇಡಬೇಕು, ಯಾವಾಗ ಬೇಕಾದರೂ  ಕ್ಲಿಕ್ ಮಾಡಿದ ತಕ್ಷಣ ಡಿಜಿಟಲ್ ಡೇಟಾ ದೊರೆಯುವಂತಿರಬೇಕು.

 ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಎಲ್ಲಾ ಇಲಾಖೆಗಳ ಹಣದ ಮಾಹಿತಿ ಪ್ರತಿಯೊಂದು ಗ್ರಾಮವಾರು, ಸರ್ವೆನಂಬರ್‌ವಾರು  ‘ಒಂದೇ ಕಡೆ ದೊರೆಯಬೇಕು’ ಯಾವಾಗ ಬೇಕಾದರೂ  ಕ್ಲಿಕ್ ಮಾಡಿದ ತಕ್ಷಣ ಸ್ಥಳೀಯ ಸಂಸ್ಥೆವಾರು, ಗ್ರಾಮವಾರು, ಡಿಜಿಟಲ್ ಡೇಟಾ ದೊರೆಯುವಂತಿರಬೇಕು.

 ಪ್ರತಿಯೊಂದು ಗ್ರಾಮದಲ್ಲಿನ ವ್ಯಕ್ತಿಯ, ಕುಟುಂಬದ ಯಾವುದೇ ‘ಬೇಡಿಕೆ’ಗಳಿದ್ದರೂ, ತಿರಸ್ಕೃತವಾಗಿದ್ದರೂ ದಾಖಲೆಯಲ್ಲಿ ನಮೂದಾಗಿರಬೇಕು.

 ಪ್ರತಿಯೊಂದು ಗ್ರಾಮದಲ್ಲಿನ ವ್ಯಕ್ತಿಯ, ಕುಟುಂಬದ ಯಾವುದೇ ವಿಧವಾದ ಬೆಳೆ, ಉತ್ಪನ್ನಗಳ ಮಾಹಿತಿಯು ದಾಖಲೆಯಲ್ಲಿ ನಮೂದಾಗಿರಬೇಕು. ಕೇಂದ್ರ ಸರ್ಕಾರದ ‘ಎಂ.ಆರ್.ಪಿ ನಿಗದಿ’ ಮಾಡಲು ಮತ್ತು ವಿತರಿಸಲು ನಿರ್ಧಿಷ್ಠ ಮಾಹಿತಿ ದೊರೆಯಲಿದೆ.

 ಕೇಂದ್ರ ಸರ್ಕಾರದಿಂದ ಯಾವುದೇ ಯೋಜನೆಗೆ ಸಂಬಂಧಿಸಿದ ‘ಅಧಿಕಾರಿಗಳ ನಿಯೋಗ’ ಆಯಾ ಜಿಲ್ಲೆಗಳಿಗೆ ಬಂದಾಗ ದಿಶಾ ಸಮಿತಿಯ ಸದಸ್ಯರು ಭೇಟಿಗೆ ಸಮಯ ನಿಗದಿಗೊಳಿಸುವುದು ಕಡ್ಡಾಯವಾಗಬೇಕು, ಭೇಟಿಯ ವಿವರವನ್ನು ದಿಶಾ ಸಮಿತಿಯಲ್ಲಿ ರ್‍ಯಾಟಿಫಿಕೇಷನ್ ಮಾಡಬೇಕು.

 ದಿಶಾ ಸಮಿತಿಯ ಸಭೆ ನಡವಳಿಕೆಗಳು ಸ್ಥಳೀಯ ಮಾತೃ ಬಾಷೆ ಮತ್ತು ಇಂಗ್ಲಿಷ್’ ಎರಡು ಬಾಷೆಯಲ್ಲೂ ವೆಬ್ ಸೈಟ್‌ಗೆ ಅಫ್ ಲೋಡ್ ಮಾಡಬೇಕು. 

ಪ್ರತಿಯೊಂದು ಯೋಜನೆಯ ಪಾರದರ್ಶಕತೆಗಾಗಿ ಸ್ಥಳೀಯ ಸಂಸ್ಥೆಗಳು ಈ ಮಾಹಿತಿಗಳನ್ನು ಗ್ರಾಮವಾರು ಸೋಶಿಯಲ್ ಮೀಡಿಯಾ’ ಗಳಲ್ಲಿ ಪ್ರಕಟಿಸುಂತಿರಬೇಕು. ಅಭಿವೃದ್ಧಿ ವಾರ್‌ರೂಂಗಳಂತೆ ಕಾರ್ಯನಿರ್ವಹಿಸಬೇಕು.

  ಪ್ರಧಾನಿಯವರಾದ ಮಾನ್ಯ ಶ್ರೀ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ’ ಕನಸು ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮೀತ್ ಷಾ ರವರು ಎಲ್ಲಾ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮದಲ್ಲಿ ನೀಡಲು ಡಿಜಿಟಲ್ ಮಾಡಿ ಅಫ್ ಲೋಡ್’ ಮಾಡುತ್ತೇವೆ, ಯಾರು ಬೇಕಾದರೂ ಯಾವುದೇ ಮಾಹಿತಿಯನ್ನು ನೋಡಿಕೊಳ್ಳಬಹುದು ಎಂಬ ಹೇಳಿಕೆಯನ್ನು ನೀಡಿದ್ದರು, ಈ ಹಿನ್ನೆಲೆಯಲ್ಲಿ ಈ ಎಲ್ಲಾ ದಾಖಲೆಗಳು ನಾಗರಿಕರಿಗೆ ದೊರೆಯುಂತಿರಬೇಕು.

  ಪ್ರತಿಯೊಂದು ಇಲಾಖೆಗೂ ’ಯೂಸರ್ ಕೋಡ್’ ನೀಡಿದಲ್ಲಿ ಎಲ್ಲಾ ಮಾಹಿತಿಗಳನ್ನು ಕುಳಿತಲ್ಲೇ ಅಫ್ ಲೋಡ್ ಮಾಡುತ್ತಾರೆ. ಒಂದು ನಿರ್ಧಿಷ್ಠ ’ಟೆಂಪ್ಲೇಟ್’ ಇರುವುದು ಸೂಕ್ತವಾಗಿದೆ. ’ತುಮಕೂರು ಸ್ಮಾರ್ಟ್ ಸಿಟಿ’ ಯೋಜನೆಯಡಿಯಲ್ಲಿ ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ.

  ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯಮಾಡಿ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಫ್ಲಿಕೇಷನ್ ಸೆಂಟರ್‌ನ ಸಹಯೋಗದೊಂದಿಗೆ ಈಗಾಗಲೇ ತುಮಕೂರು ಜಿಐಎಸ್’ ಲೋಕಾರ್ಪಣೆ ಮಾಡಿ. ಎಲ್ಲಾ ಇಲಾಖೆಗಳ ಡಿಜಿಟಲ್ ಡೇಟಾಗಳನ್ನು, ಯೋಜನಾವಾರು ಜಿಐಎಸ್ ಆಧಾರಿತ ಲೇಯರ್’ ಮಾಹಿತಿಗಳನ್ನು ಒಂದೇ ನಕ್ಷೆಯಲ್ಲಿ ಬರುವಂತೆ ಅಫ್ ಲೋಡ್ ಮಾಡುವ ಕಾರ್ಯ ಆರಂಭವಾಗಿದೆ.

  ಕೇಂದ್ರದ ಎಲ್ಲಾ ವಿಧವಾದ ಅನುದಾನದ ಲೆಕ್ಕ ಒಂದೇ ಕಡೆ ತರಬೇಕಾದರೆ ಇದು ಆಗಲೇಬೇಕು. ರಾಜ್ಯ ಮಟ್ಟದ ದಿಶಾ ಇನ್ನೂ ಟೇಕ್ ಅಫ್ ಆಗಿಲ್ಲ, ದಿಶಾ ಸಮಿತಿಗಳು ಬಗ್ಗೆ ಚಿಂತನೆ ಆರಂಭಿಸಿದಲ್ಲಿ ಕೇಂದ್ರದಿಂದ ಹೆಚ್ಚಿಗೆ ಅನುದಾನ ಪಡೆಯಲು ಸಹಕಾರಿಯಾಗ ಬಹುದು. ನಮ್ಮ ರಾಜ್ಯದ ಸಂಸದರು ಧ್ವನಿ ಎತ್ತುವರೇ ಕಾದು ನೋಡೋಣ?