25th April 2024
Share

TUMAKURU:SHAKTHIPEETA FOUNDATION 

ಮಾನ್ಯರೇ

ಮುಖ್ಯಮಂತ್ರಿಯವರು-1

ಉಪ ಮುಖ್ಯಮಂತ್ರಿಯವರು-3

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ರಾಜ್ಯದ ಸಚಿವರು-4

ಸಚಿವರು-24

ಲೋಕಸಭಾ ಸದಸ್ಯರು-28 (ಕೇಂದ್ರ ಸಚಿವರು ಸೇರಿ)

ರಾಜ್ಯಸಭಾ ಸದಸ್ಯರು-12 (ಕೇಂದ್ರ ಸಚಿವರು ಸೇರಿ)

ವಿಧಾನಸಭಾ ಸದಸ್ಯರು-225 (ಸಚಿವರು ಮತ್ತು 2 ಖಾಲಿ ಸ್ಥಾನ ಸೇರಿ)

ವಿಧಾನಪರಿಷತ್ ಸದಸ್ಯರು-75 (ಸಚಿವರು ಸೇರಿ)

ಒಟ್ಟು-340

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು-30

ಜಿಲ್ಲಾಧಿಕಾರಿಗಳು-30

ಜಿಲ್ಲಾ ಪಂಚಾಯತ್ ಸಿಇಓ ಮತ್ತು ದಿಶಾ ಸಮಿತಿ ಸದಸ್ಯಕಾರ್ಯದರ್ಶಿ-30

ಒಟ್ಟು-90

ಎಲ್ಲಾ ಸೇರಿ ಒಟ್ಟು= 430

  ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಜಿಯವರು ಕೊರೊನಾ ಪ್ರಯುಕ್ತ 9 ಗಂಟೆ 9 ನಿಮಿಷಕ್ಕೆ ದೀಪ ಹಚ್ಚಲು ಕರೆ ನೀಡಿದಾಗ ದೇಶದ ಜನತೆ 9 ದೀಪಗಳನ್ನು ಹಚ್ಚಿ ಬೆಂಬಲಿಸಿದ್ದು ಇತಿಹಾಸ.

 ಈ ಹಿನ್ನೆಲೆಯಲ್ಲಿ ಮೇಲ್ಕಂಡ 430 ಜನರಲ್ಲಿ ವಿಶೇಷ ಮನವಿ ಏನೆಂದರೆ ತಾವು ಕೇಂದ್ರ ಸರ್ಕಾರದ ಕನಿಷ್ಠ 9 ಯೋಜನೆಗಳ ಶೇ 100 ಜಾರಿಗೆ ತರಲು ಪ್ರಯತ್ನಿಸಲು ಶ್ರಮಿಸ ಬಹುದಲ್ಲವೇ? ಕೇಂದ್ರ ಸರ್ಕಾರಕ್ಕೂ ವಿಶೇಷವೆನಿಸಬಹುದು.

340 ಜನಪ್ರತಿನಿಧಿಗೊಂದು ಕೋವಿಡ್19 ಎಕನಾಮಿಕ್ ವಿಲೇಜ್ ಬಗ್ಗೆ ಈಗಾಗಲೇ ಬರೆದಿದ್ದು ಇದರ ಜೊತೆಗೆ ಅದನ್ನು ಕಳುಹಿಸಲಾಗಿದೆ.

  ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು 2022 ರೊಳಗೆ ಹಲವಾರು ಯೋಜನೆಗಳ ಪೂರ್ಣಗೊಳಿಸಲು ಕರೆ ನೀಡಿದ್ದಾರೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕೆಳಕಂಡ ಯೋಜನೆಗಳಲ್ಲಿ ಹಲವಾರು ಯೋಜನೆಗಳನ್ನು 2020-21 ನೇ ಆಯವ್ಯಯದಲ್ಲಿ ಮಂಡಿಸಿದ್ದಾರೆ. ಕೊರೊನಾ ಆರ್ಥಿಕ ಮುಗ್ಗಟ್ಟು ಯೋಜನೆ ಜಾರಿಗೆ ಅಡ್ಡಿ ಬಂದರು ಯೋಜನೆಗಳ ಮಾಸ್ಟರ್ ಪ್ಲಾನ್ ಮಾಡಲು ಮತ್ತು ಕೆಲವು ಯೋಜನೆಗಳನ್ನು ಜಾರಿಗೊಳಿಸಲು ಕಷ್ಟವಾಗಲಾರದು.

  1. ಗ್ರಾಮ-1
  2. ವಿಧಾನಸಭಾ ಕ್ಷೇತ್ರಕ್ಕೊಂದು ಬಹುಪಯೋಗಿ ಕ್ಯಾಂಪಸ್.
  3. 2022 ರೊಳಗೆ ಎಲ್ಲರಿಗೂ ಮನೆ (ಕಡೇ ಪಕ್ಷ ನಿವೇಶನವನ್ನಾದರೂ ಕೊಡಬಹುದು)
  4. ಜಲಗ್ರಾಮ ಕ್ಯಾಲೆಂಡರ್ ಮತ್ತು ನದಿ ನೀರಿನ ಅಲೋಕೇಷನ್.
  5. 2022 ರೊಳಗೆ ಮನೆ ಮನೆಗೆ ಗಂಗೆ/ ನಲ್ಲಿ ನೀರು. (ಕಡೇ ಪಕ್ಷ ಮಾಸ್ಟರ್‌ಪ್ಲಾನ್ ಮಾಡಬಹುದು)
  6. ನದಿ ನೀರಿನಿಂದ ಮೈಕ್ರೋ ಇರ್ರಿಗೇಷನ್. (ಕಡೇ ಪಕ್ಷ ಮಾಸ್ಟರ್‌ಪ್ಲಾನ್ ಮಾಡಬಹುದು)
  7. ಹಸಿರು – ಕರ್ನಾಟಕ.
  8. ಡಿಜಿಟಲ್ ಗ್ರಾಮ.
  9. ಆರೋಗ್ಯ ಗ್ರಾಮ. (ಸಮೀಕ್ಷೆ ಮಾಡಿ ಡಿಜಿಟಲ್ ಮಾಹಿತಿ ಮಾಡಬಹುದು)

 ನಮ್ಮ ಶಕ್ತಿಪೀಠ ಫೌಂಡೇಷನ್ 340 ಜನ ಪ್ರತಿನಿಧಿಗಳಲ್ಲಿ ಒಬ್ಬ ಪ್ರತಿನಿಧಿಯ ವ್ಯಾಪ್ತಿಯಲ್ಲಿ, ಈ ಯೋಜನೆಯನ್ನು ದತ್ತು ಪಡೆದು ಮೋದಿಯವರ ಸಂಸದರ ಆದರ್ಶ ಗ್ರಾಮ ಯೋಜನೆಯೇ ಮಾರ್ಗಸೂಚಿ. ಸರ್ಕಾರಗಳಿಂದ ಆರ್ಥಿಕ ನೆರವು, ಸಿ.ಎಸ್.ಆರ್ ಫಂಡ್ ಮತ್ತು ಹೂಡಿಕೆದಾರರಿಂದ ಹೂಡಿಕೆ ಮಾಡಿಸುವ ಮೂಲಕ ಫೈಲಟ್ ಯೋಜನೆ ಯನ್ನು ಅನುಷ್ಠಾನ ಗೊಳಿಸಲು ಶ್ರಮಿಸಲು ಮುಂದಾಗಿದೆ.

ಇದೇ ವಿಶ್ವದ ಪ್ರಥಮ ಕೋವಿಡ್19 ಎಕನಾಮಿಕ್ ವಿಲೇಜ್ ಆಗಲಿ ಎಂಬುದು ನಮ್ಮ ಸಂಸ್ಥೆಯ ಕನಸು. ಯಾವ ಚುನಾಯಿತ ಪ್ರತಿನಿಧಿ ಆಹ್ವಾನ ನೀಡುತ್ತಾರೋ ಅಲ್ಲಿಯೇ ಆರಂಭ ಮಾಡಲಾಗುವುದು.

 ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ರಾಜ್ಯ ಮಟ್ಟದ ದಿಶಾ ಸಮಿತಿ ಸೂಕ್ತ ಕ್ರಮ ಕೈಗೊಳ್ಳುವುದು ಸೂಕ್ತವಾಗಿದೆ.